ಅಜಗಣ್ಣ ತಂದೆ ಗದುಗಿನ ಜಿಲ್ಲೆಯ ಲಕ್ಕಂಡಿ ಗ್ರಾಮದವನು. ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ. ಮುಕ್ತಾಯಕ್ಕನ ಅಣ್ಣ. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೊಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತದೆ/ಸಾದರ ಪಡಿಸುತ್ತದೆ. ಅಂಕಿತನಾಮ ನಿರ್ವಚನ ಕಾಣಾ ಸಿದ್ದರಾಮಯ್ಯಾ. ಪ್ರಾಚೀನ ಕಾಲದಲ್ಲಿ ಲಿಪಿಕಾರರರ, ಅಭ್ಯಾಸಿಗಳ ದಾಳಿಗೂ ಇವು ಅಷ್ಟಾಗಿ ಗುರಿಯಾಗಿಲ್ಲವಾಗಿ ಇವುಗಳ ಪಾಠ ಕೆಲಮಟ್ಟಿಗೆ ಸುರಕ್ಷಿತವಾಗಿದೆ. ಹೀಗಿದ್ದೂ ಈ ಸಂಪುಟದ ಉರಲಿಂಗಪೆದ್ದಿಯ ವಚನಗಳು ಸಂಸ್ಕೃತ ವಿದ್ವಾಂಸರ ಕೈವಾಡದಿಂದ ವಿರೂಪಗೊಳ್ಳುತ್ತ ಬಂದರೆ, ಅಂಬಿಗರ ಚೌಡಯ್ಯನ ಸಹಜವಾಗಿಯೇ ಪಾಠಾಂತರದ ದಾಳಿಗೆ, ಪ್ರಕ್ಷಿಪ್ತತೆಯ ಅನ್ಯಾಯಕ್ಕೆ ಗುರಿಯಾಗಿವೆ. ಇದಲ್ಲದೆ ಇವನ ವಚನಗಳು ಪುರವಂತರ ಒಡಬುಗಳಾಗಿ ಬಳಕೆಗೊಳ್ಳುತ್ತಿರುವಲ್ಲಿ, ಬೇರೆ ಒಡಬುಗಳೂ ಚೌಡಯ್ಯನ ವಚನಗಳಾಗಿ ನಿಂತುದರಿಂದ, ಇವುಗಳ ಪರಿಷ್ಕರಣ ಜಟಿಲವೆನಿಸಿದೆ. ಈ ಎಲ್ಲ ತಿಳಿವಳಿಕೆಯ ಹಿನ್ನೆಲೆಯಲ್ಲಿ 24 ಜನ ಶರಣರ ವಚನಗಳನ್ನು ಇಲ್ಲಿ ಪರಿಷ್ಕರಿಸಿ ಕೊಡಲಾಗಿದೆ.